
ಯಂಗ್ ಯುನೈಟೆಡ್ ಫ್ರೆಂಡ್ಸ್ ಸಾಂತ್ವನ ವಿಭಾಗ
ಒಳ್ಳೆಯದನ್ನುಬಯಸು ಇದು ಕೇವಲ ಸೇವೆಯಲ್ಲ ನಾವು ಮಾಡಬೇಕಾದಂತಹ ಕರ್ತವ್ಯ.
"ಯಂಗ್ ಯುನೈಟೆಡ್ ಫ್ರೆಂಡ್ಸ್ ಸಾಂತ್ವನ ವಿಭಾಗ" ಮತ್ತು "ಜಿ ಎಚ್ ಎಮ್ ಫೌಂಡೇಶನ್" ಸಾಂತ್ವನದ ವತಿಯಿಂದ ಇಂದು "ಇಂಡಿಗೋ" ಚಾರ್ಟೆಡ್ ವಿಮಾನ ಒಂದು ದಮ್ಮಾಮ್ ನಿಂದ ಮಂಗಳೂರಿಗೆ ಬೆಳಿಗ್ಗೆ 10-45 ಕ್ಕೆ (Saudi time) ಸರಿಯಾಗಿ ಹೊರಟ್ಟಿದ್ದು, ಅದೇ ರೀತಿ ಸಂಜೆ 5-15 ಕ್ಕೆ (indian time) ಕ್ಲಪ್ತ ಸಮಯದಲ್ಲಿ ತಲುಪಿದೆ.
ನಮಗೆ ಈ ಒಂದು ಅವಕಾಶವು ಸಿಕ್ಕಿದ ಕೂಡಲೇ ನಮ್ಮ ಸಾಂತ್ವನ ವಿಭಾಗಕ್ಕೆ ಏನಾದರೂ ಲಾಭವಾಗಬಹುದು ಎಂದು ಚಿಂತಿಸಿ ಎಲ್ಲಾ ಕೆಲಸ ಕಾರ್ಯಗಳ ನಡುವೆಯೇ ಇದನ್ನು ಸಹ ಸೇರಿಸಿಕೊಂಡು ನಮ್ಮ ನಿರ್ವಾಹಕರು ಕ್ಲಪ್ತ ಸಮಯದಲ್ಲಿ ಎಲ್ಲಾ ಕೆಲಸ ಕಾರ್ಯವನ್ನು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ನಾವು ಎಲ್ಲಾ ಪ್ರಯಾಣಿಕರಿಗೆ ನಮ್ಮಿಂದಾಗುವ ಎಲ್ಲಾ ಸಹಾಯವನ್ನು ಒಳ್ಳೆಯ ರೀತಿಯಲ್ಲಿಯೇ ಮಾಡಿರುತ್ತೇವೆ. ಎಲ್ಲಾ ಪ್ರಯಾಣಿಕರಿಗೂ ನಮ್ಮ ಸೇವೆಯು ಖುಷಿ ಉಂಟುಮಾಡಿದೆ.
ನಮ್ಮ ಸಾಂತ್ವನ ವಿಭಾಗದೊಂದಿಗೆ ಜಿ ಎಚ್ ಎಮ್ ಫೌಂಡೇಶನ್ ಸಾಂತ್ವನ ವಿಭಾಗವು ಒಳ್ಳೆಯ ರೀತಿಯಲ್ಲಿ ಕೈ ಜೋಡಿಸಿದ್ದಾರೆ.




